ಡಾ.ಕಲಬುರ್ಗಿಯವರು ನನ್ನವಿದ್ಯಾಗುರುಗಳು.ಕನ್ನಡ ಅಧ್ಯಯನ ಪೀಠದಲ್ಲಿ ನಮಗವರು ಛಂದಸ್ಸು,ಗ್ರಂಥಸಂಪಾದನಾಶಾಸ್ತ್ರಮತ್ತುಸಂಶೋಧನಾಶಾಸ್ತ್ರಗಳನ್ನುಬೋಧಿಸುತ್ತಿದ್ದರು
ಛಂಧಸ್ಸಿನ ಸೂತ್ರಗಳು ನನ್ನನೆನಪಿನಲ್ಲಿರಲು ಅವರ ಬೋಧನೆಯೇ ಕಾರಣ.ಆಂತರಿಕ ಮೌಲ್ಯಮಾಪನಕ್ಕಾಗಿ ನಾಲ್ಕು
ಸಂಶೋಧನಾ ಲೇಖನಗಳನ್ನು ಸಿದ್ಧಪಡಿಸಬೇಕಿತ್ತು.ಆ ಸಂದರ್ಭದಲ್ಲಿ ಅವರು ನೀಡಿದ ಮಾರ್ಗದರ್ಶನ ಮರೆಯಲಾಗದು.ಇದೇ
ನವೆಂಬರ 28ರಂದು ಅವರ ಜನ್ಮದಿನ.ಯಾರನ್ನೂದ್ವೇಷಿಸದ ಅವರು ಬದುಕಿದ್ದರೆ 77ವರ್ಷ ತುಂಬುತಿತ್ತು.ಅನ್ಯಾಯವಾಗಿ
ಹತ್ಯೆಯಾದ ಆ ಗುರುಜೀವಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ
ಕವನ ಒಂದು ಇಲ್ಲಿದೆ.
ಡಾ.ಕಲಬುರ್ಗಿ
----------------
ಇವನೊಬ್ಬಜಂಗಮ
ನಿಂತಲ್ಲಿ
ನಿಲ್ಲದೆ,ಕುಳಿತಲ್ಲಿ ಕೂಡದೆ
ಅತ್ತಿತ್ತ
ಅಲೆದಾಡಿ,
ಕತ್ತಲಲಿ
ಅಡಗಿರುವ
ಸತ್ಯಕ್ಕೆ
ಬೆಳಕು ಚೆಲ್ಲುವವ.
ಈತ ಕಣ್ಣು
ಹಾಯಿಸಿದಲ್ಲೆಲ್ಲ
ಸಮಸ್ಯೆಯ
ಸಿಕ್ಕುಗಳೇ!
ಎಲ್ಲವೂ
ಕಗ್ಗಂಟು.
ಬುದ್ಧಿ-ಭಾವಗಳ
ಸಮರಸದಿ
ಸಿಕ್ಕುಬಿಡಿಸಿದಾಗ
ಅಡಗಿರುವ
ಸತ್ಯ ಅಸ್ತಿತ್ವ ಸಾರುವದು.
ಅಲ್ಲಿಂದ
ಪ್ರಾರಂಭ ವಾದ-ವಿವಾದ
ಕೋರ್ಟು-ಕಚೇರಿಯತ್ತಲೂ
ಇವನ ಪಾದ,
ಮಠ-ಮಾನ್ಯಗಳಿಂದಲೂ
ಬಿರುನುಡಿಯ ವೇಧೆ.
ಆದರೂ ಕುಗ್ಗಿಲ್ಲ;
ಸ್ವಲ್ಪವೂ
ತಗ್ಗಿಲ್ಲ,
ಮುಂಚಿಗಿಂತಲೂ
ಈಗ ಉತ್ಸಾಹ ಅಧಿಕ
ಹಲವರಿಗೆ
ಈತ ‘ಮಾರ್ಗ’ದರ್ಶಕ
‘ಜನಮೆಚ್ಚಿ
ನಡಕೋಂಡರೇನಿಹುದು ಜಗದೀ
ಮನಮೆಚ್ಚಿ
ನಡಕೊಂಬುದೇ ಚೆಂದವು’
ವೇದಿಕೆ
ಹತ್ತಿ ನಿಂತರೆ
ಸಲಿಲವಾಗಿ
ಹರಿಯುವದು ವಾಕ್ ಪ್ರವಾಹ
ಎಲ್ಲಿಯೂ
ಕೊಳೆಯಿಲ್ಲ,ಕೊಸರಿಲ್ಲ.
ಬಿಳಿ-ಬಿಳಿ
ನೊರೆಚೆಲ್ಲುವ ಹಾಲು ಅದೆಲ್ಲ.!
- ಶ್ರೀಧರ ಬಿ.ನಾಯಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ