ಶನಿವಾರ, ನವೆಂಬರ್ 28, 2015

ಹೃದಯವಿಲ್ಲದ ಸರಕುಗಳು ಹಸಿದ ಹೊಟ್ಟೆಗೆ ಅನ್ನ ಹುಡುಕಿ ಭಿಕ್ಷಕ್ಕೆ ತೆರಳಿದರೆ ಯಾರ ಮನೆಯಲ್ಲಿಯೂ ಒಲೆ ಉರಿಯುತ್ತಿಲ್ಲ!! ಫಿಜ್ಜಾ-ಬರ್ಗರ್ಗೆ ಆರ್ಡರ್ ಕೊಟ್ಟು ಬರುವಿಕೆಗಾಗಿ ಕಾಯುತ್ತಿದ್ದಾರೆ.!! ಬಾಯಾರಿ ನೀರಿಗಾಗಿ ಕೆರೆ-ಹಳ್ಳಗಳನ್ನು ಹುಡುಕಿಹೊರಟರೆ ಅಲ್ಲೆಲ್ಲ ತಲೆ ಎತ್ತಿವೆ ಭವ್ಯ ಮಹಲುಗಳು,ಅಪಾರ್ಟಮೆಂಟ್ ಗಳು!! ಬಾಟಲಿಯಲ್ಲಿ ಅವಿತ ನೀರು ಮಾರಾಟಕ್ಕಿದೆ. ನಿದ್ರಿಸಲೆಂದು ಹಾಳು ದೇಗುಲ ಹುಡುಕಿಹೊರಟರೆ ದೇಗುಲಗಳೆಲ್ಲ ನವೀಕರಣಗೊಂಡಿವೆ. ಕಾವಲಿಗೆ ಸೆಕ್ಯೂಟರಿ ಗಾರ್ಡ ನಿಂತಿದ್ದಾರೆ!! “ಅನುಮತಿ ಇದ್ದವರಿಗೆ ಮಾತ್ರ ಪ್ರವೇಶ” ಎಂಬ ಬೋರ್ಡು ನೇತು ಬಿದ್ದಿದೆ. ಆತ್ಮಸಂಗಾತಿಯನ್ನು ಅರಸಿ ಹೊರಟರೆ ಹಸಿಮಾಂಸದ ದೇಹವನ್ನು ಹರಿದು ಹಂಚಿ ತಿನ್ನಲು ಸಂಚು ಹೂಡಿವೆ ಆತ್ಮವಿಲ್ಲದ ವಿಕೃತ ಮನಸ್ಸುಗಳು. ಯಾರಿದ್ದರೇನಂತೆ?ಏನಿದ್ದರೇನಂತೆ? ಎಲ್ಲ ಹೃದಯವಿಲ್ಲದ ಸರಕುಗಳು!!? --ಶ್ರೀಧರ ನಾಯಕ,ಬೇಲೇಕೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ