ಸೋಮವಾರ, ಮಾರ್ಚ್ 21, 2016

ಹೌದು ,ಕಾಲ ಬದಲಾಗುತ್ತಿದೆ! .ಮುಂಜಾನೆ  ಅಲಾರಾಂ ನ ಸದ್ದಿನ ಬದಲು ಕೋಗಿಲೆಯ ಕುಹೂ ಕುಹೂ ನಾದಕ್ಕೆ ಎಚ್ಚರ . ಕಣ್ಬಿಟ್ಟು ಕಿವಿಯಗಲಿಸಿದರೆ ಕೋಗಿಲೆಯ ನಾದದೊಂದಿಗೆ ಇದುವರೆಗೆ ಕೇಳಿರದ ಹಕ್ಕಿಗಳ ಕಲರವ. ಕುತೂಹಲಗೊಂಡು ಬಾಗಿಲು ತೆರೆದರೆ ತಣ್ಣನೆಯ ಗಾಳಿ ಮೈ ಸೋಕಿ ಹಿತದ ಅನುಭವ . ಮನೆಯ ಮುಂದಿನ ಗಿಡಗಳು ಮೈತುಂಬ ಹೂ ಮುಡಿದು ವೈಯಾರದಿಂದ ಓಲಾಡುತ್ತಿವೆ. ಮುಖ ತೊಳೆದು ಹೊರಬರುತ್ತಿದ್ದಂತೆ ಮೇಲ್ಬಂದ ಸೂರ್ಯನ ಕಿರಣಗಳು ತಂಪನ್ನು ಓಡಿಸಿ ಬಿಸಿಲ ತಾಪದ ರುಚಿ ತೋರಿಸುತ್ತಿವೆ.ಮೈಯಲ್ಲಿ ಬೆವರ ಹನಿಗಳು ಮೊಳಕೆಯೊಡೆಯುತ್ತಿವೆ.ಹೌದು,ಕಾಲ ಬದಲಾಗುತ್ತಿದೆ!!